|
ಸಾಮಾನ್ಯವಾಗಿ
ಮಾಹಿತಿ ತಂತ್ರಜ್ಞಾನ
ಹಾಗು ಇನ್ನಿತರ
ಉನ್ನತ ಕ್ಷೇತ್ರಗಳ
ಸಂಸ್ಥೆಗಳಲ್ಲಿ
ಬಹಳಷ್ಟು ಕನ್ನಡಿಗರು
ಕಾಣಸಿಗುವುದಿಲ್ಲ.
ಇದಕ್ಕೆ ಪ್ರಮುಖ
ಕಾರಣಗಳು:
- ಹೆಚ್ಚಾಗಿ,
ಪದವೀಧರ ಕನ್ನಡಿಗರಲ್ಲಿ
ಆಂಗ್ಲ ಭಾಷೆಯ
ಉಪಯೋಗದ ಹಿಂಜರಿತ
ಮತ್ತು ಅದರಿಂದ
ಉಂಟಾಗಬಹುದಾದ
ಸಂವಹನದ ಕೊರತೆಯನ್ನೇ
ಮುಖ್ಯ ಕಾರಣವಾಗಿರಿಸಿ,
ಬೇರೆ ಭಾಗದ ಜನರನ್ನೇ
ಸಂಸ್ಥೆಗಳು ಉದ್ಯೋಗಕ್ಕಾಗಿ
ತೆಗೆದುಕೊಳ್ಳುತ್ತಿರುವುದು
ಮತ್ತು ಸಂಸ್ಥೆಯ
ಅಧಿಕಾರಿಗಳು
ತಮ್ಮ ಭಾಗದ ಜನರನ್ನು
ನೇಮಕ ಮಾಡಿಕೊಳ್ಳುವುದು.
ಎಷ್ಟೋ ಸಂದರ್ಭಗಳಲ್ಲಿ
ಸಂಸ್ಥೆಗಳು,
ತಮ್ಮ ಉದ್ಯೊಗಿಗಳ
ಮೂಲಕವೇ, ಹೊಸಬರನ್ನು
ತೆಗೆದುಕೊಳ್ಳುವುದರಿಂದ
(Walk ins) ಸಂಸ್ಥೆಯ ಹೊರಗೆ
ಇರುವ ಕನ್ನಡಿಗರಿಗೆ,
ಸ್ಪರ್ಧಿಸುವ
ಅವಕಾಶವು ತಪ್ಪಿದಂತೆ
ಆಗುತ್ತದೆ.
ಕೇಂದ್ರ ಸರಕಾರದ
ಖಾಲಿ ಇರುವ ಎಷ್ಟೋ
ಸ್ಥಾನಗಳ ಭರ್ತಿಗಾಗಿ,
ಬರುವ ಜಾಹಿರಾತುಗಳು
ಕನ್ನಡಿಗರನ್ನು
ತಲುಪುವುದಿಲ್ಲ,
ಹಾಗೂ ಅವುಗಳು
ಒಂದೇ ಸ್ಥಳದಲ್ಲಿ
ಲಭ್ಯವಾಗದೆ ಇರುವುದರಿಂದ
ಬಹುಪಾಲು ಕನ್ನಡಿಗರಿಗೆ
ಅರ್ಜಿ ಹಾಕುವ
ಅವಕಾಶವೇ ತಪ್ಪುತ್ತದೆ.
ಮೇಲಿನ ಕೆಲವು
ಸಮಸ್ಯೆಗಳ ಪರಿಹಾರಕ್ಕೆ
ಇಲ್ಲಿ ಸಿಗುವ
ಸೌಲಭ್ಯಗಳೆಂದರೆ,
ಆಂಗ್ಲ ಭಾಷೆಯಲ್ಲಿ
ಸುಲಲಿತವಾಗಿ
ಮಾತನಾಡಲು ಸಹಕರಿಸುವ
ಉಚಿತ ಧ್ವನಿ
ಮುದ್ರಣ ಮತ್ತು
ಭಾಷೆಗೆ ಸಂಬಂಧಿತ
ಮಾಹಿತಿಗಳು ಮತ್ತು
ಸ್ಥಳಕ್ಕನುಗುಣವಾಗಿ
ಉದ್ಯೋಗಾವಕಾಶಗಳ
ಬಗ್ಗೆ ಮಾಹಿತಿಯನ್ನು
ನೀಡುವುದು.
ಇವಲ್ಲದೆ,
- ಸಾಮಾನ್ಯವಾಗಿ
ಕನ್ನಡಿಗರಿಗೆ
ಉಪಯೋಗಕ್ಕೆ ಬರುವ
ಅರ್ಜಿ ನಮೂನೆಗಳ,
ತಂತ್ರಾಂಶಗಳ
ಡೌನ್ ಲೋಡ್.
ನಗರ ಮತ್ತು
ಜಿಲ್ಲೆಗಳ ಉಪಯುಕ್ತ
ಅಂತರ್ಜಾಲ ಕೊಂಡಿಗಳು,
ದೂರವಾಣಿ ಸಂಖ್ಯೆಗಳು,
ವಿಳಾಸ ಸೂಚಿ,
’ಇ-ಮೈಲ್’ ವಿಳಾಸಗಳು,ಸಾಂಸ್ಕೃತಿಕ
ಹಾಗು ಸಾರ್ವಜನಿಕ
ಕಾರ್ಯಕ್ರಮಗಳ
ಪಟ್ಟಿ ಇತ್ಯಾದಿ
ಈ ತಾಣದ ಕಲ್ಪನೆ,
ಯೋಜನೆ, ಪ್ರಾಯೋಜಕತ್ವ FREEganitaದ
ಸಂಸ್ಥಾಪಕರದ್ದು
ಆಗಿದ್ದರೂ,
ಇದರ ಸಂಪೂರ್ಣ
ಜವಾಬ್ದಾರಿ
ಮತ್ತು ದೈನಂದಿನ
ನಿರ್ವಹಣೆಯನ್ನು
, ಕನ್ನಡಿಗರ
ಪರವಾಗಿ ಕೆಲವು
ಶ್ರದ್ಧಾವಂತ
ಕನ್ನಡಿಗರು ನಿರ್ವಹಿಸುತ್ತಿದ್ದು(
ಸಂಪರ್ಕಿಸಿ ) ಕನ್ನಡಿಗರೆಲ್ಲರ
ಬೆಂಬಲ ಮತ್ತು
ಸಹಕಾರವನ್ನು
ಕೋರುತ್ತೇವೆ.
ಈ ಅಂತರ್ಜಾಲದಲ್ಲಿ
ಮಾಹಿತಿಗಳನ್ನು
ಹೆಚ್ಚಿಸುವಲ್ಲಿ
ಸಹಕರಿಸುವ ಯಾವುದೆ
ವ್ಯಕ್ತಿ ಅಥವಾ
ಸಂಸ್ಥೆಗಳ ಸಹಾಯವನ್ನು
ನಾವು ತುಂಬು
ಮನಸ್ಸಿನಿಂದ
ಸ್ವಾಗತ್ತಿಸುತ್ತೇವೆ.
ಆಂಥವರು ಇಲ್ಲಿಗೆ
ಬರೆಯಬಹುದು (ಕ್ಲಿಕ್ಕಿಸಿ).
This project Kannada mitra of Kannadigas is conceived, designed, executed and sponsored by founder of www.FREEganita.com (a mathamatics portal for High school students(class 8,9,10) covering syllabuses of CBSE, ICSE and many state boards such as Karnataka, Andhra Pradesh, Maharashtra, Kerala,...)
ಪ್ರೌಢ ಶಾಲಾ
( ೮,೯,೧೦ ನೇ
ತರಗತಿ) ಮಕ್ಕಳಿಗಾಗಿ
ಇರುವ ಗಣಿತದ
ವೆಬ್ ಸೈಟ್ www.FREEganita.comನ್ನು
ನೀವು ಒಮ್ಮೆ
ಯಾಕೆ ಸಂದರ್ಶಿಸಬಾರದು?
|