ಇಲ್ಲಿ ಉದ್ಯೋಗ ಮಾಹಿತಿ ಹಾಕುವ ಮೊದಲು ಇದನ್ನು ಓದಿರಿ.

 

೧. ಯಾವುದೇ ಸಂಸ್ಥೆಯಲ್ಲಿ ಉದ್ಯೋಗಗಳು ಯಾವಾಗಲೂ ಸೀಮಿತ ಸಂಖ್ಯೆಯಲ್ಲಿಯೇ ಇರುತ್ತವೆ. ಕೆಲಸ ಖಾಲಿ ಇರುವ ಮಾಹಿತಿ ನಿಮಗೆ ಸಿಗುವಾಗ ಅದು ಕನ್ನಡೇತರರಿಗೂ ಸಿಕ್ಕಿಯೇ ಇರುತ್ತದೆ. ಹಾಗಿರುವಾಗ ಆದಷ್ಟು ಬೇಗ ಕನ್ನಡಿಗರಿಗೆ ಸಿಗಬೇಕಾದರೆ ಅದನ್ನು ಕೂಡಲೇ ಕನ್ನಡಮಿತ್ರ.ಕಾಂ ನಲ್ಲಿ ಹಾಕಿದರೆ ಒಳ್ಳೆಯದಲ್ಲವೇ? ಈಗ ಇಲ್ಲಿ ಮಾಹಿತಿ ಹಾಕಲು ಯಾರೂ ಯಾರಿಗೂ ಕಾಯಬೇಕಾಗಿಲ್ಲ.

೨. ಮಾಹಿತಿ ಸಿಕ್ಕಿದವರಿಗೆ, ಸಂಬಂಧಿಸಿದ ಉದ್ಯೋಗದ ಬಗ್ಗೆ ನಮಗಿಂತ ಹೆಚ್ಚಿನ ತಿಳುವಳಿಕೆ ಇರುವುದರಿಂದ ಅವರೇ ಮಾಹಿತಿ ಹಾಕಿದರೆ ಅದು ಸರಿಯಾಗಿಯೇ ಇರುತ್ತದೆ.

೩. ಈ ಹಿಂದೆ ಹಲವು ಬಾರಿ, ನಮಗೆ ದೊರಕಿದ ಮಾಹಿತಿ ಸರಿ ಇದೆ ಎಂದು ಮಾಹಿತಿಯನ್ನು ನಾವು ಹಾಕಿದಾಗ, ಅದನ್ನು ತೆಗೆಯಿರಿ ಎಂದು ಕೆಲವರು ತಿಳಿಸಿರುತ್ತಾರೆ. ಮಾಹಿತಿ ಸಿಕ್ಕಿದವರೇ ಮಾಹಿತಿ ಹಾಕಿದಾಗ ಈ ಪರಿಸ್ಥಿತಿ ಬರುವುದಿಲ್ಲ.

೪. ಕೆಲವರು ಅರ್ಜಿ ಸ್ವೀಕರಿಸಲು, ಗೋಪ್ಯತೆಗಾಗಿ ಮತ್ತು ಅನುಕೂಲತೆಯ ದೃಷ್ಟಿಯಿಂದ ತಮ್ಮ ಸ್ವಂತ ’ಇ ಮೈಲ್’ ವಿಳಾಸದ ಬದಲು ಬೇರೆಯೇ ’ಇ ಮೈಲ್’ ವಿಳಾಸವನ್ನು ಇಟ್ಟು ಕೊಂಡಿರುತ್ತಾರೆ. ಈಗ ಅವರೇ ಮಾಹಿತಿ ಹಾಕುವುದರಿಂದ, ಅರ್ಜಿ ಸ್ವೀಕರಿಸಲು ಅವರು ಬೇರೆ ’ಇ ಮೈಲ್’ ವಿಳಾಸವನ್ನು ಈಗ ಸೂಚಿಸಬಹುದು.

೫. ರೆಫರಲ್/ವಾಕ್ ಇನ್ ಸಂದರ್ಭಗಳಲ್ಲಿ ಸೂಚಿಸಿದ ವ್ಯಕ್ತಿ ಆಯ್ಕೆ ಗೊಂಡಾಗ ಸೂಚಿಸಿದವರಿಗೆ ಸಂಸ್ಥೆಯವರು ಹಣ/ಇತರ ಉತ್ತೇಜಕ ಸೌಲಭ್ಯ ಕೊಡುವುದರಿಂದ, ಮಾಹಿತಿಯನ್ನು ಅವರೇ ಹಾಕಿದರೆ, ಸಂಸ್ಥೆಯಲ್ಲಿ ಕೆಲಸಮಾಡುತ್ತಿರುವ ಹೆಚ್ಚಿನ ಕನ್ನಡಿಗರು ಉತ್ತೇಜನ ಹಣ ಗಳಿಸುವುದಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿಗೆ ಕೆಲಸ ಸಿಗುವ ಸಾಧ್ಯತೆಗಳಿರುತ್ತವೆ.

 

ಮಾಹಿತಿ ಹಾಕಲು ಅನುಸರಿಸಬೇಕಾದ ಕೆಲವು ಸಲಹೆ/ಸೂಚನೆಗಳು:

 

೧. ಎಲ್ಲಾ ಮಹಿತಿಯನ್ನು ಇಲ್ಲಿಯೇ ಪೂರ್ತಿ ಕನ್ನಡದಲ್ಲೇ ಹಾಕಬೇಕಾಗಿಲ್ಲ. ಅತ್ಯಂತ ಅಗತ್ಯ ಮಾಹಿತಿಯನ್ನು ಮಾತ್ರ ಇಲ್ಲಿ ಕನ್ನಡದಲ್ಲಿ ಹಾಕಿ ಹೆಚ್ಚಿನ ವಿವರಗಳಿಗೆ ನಿಮ್ಮ ಯಾಹೂ/ಗೂಗಲ್ ಗ್ರೂಪ್ ನ ಹೆಸರು ಸೂಚಿಸಿದರೆ ನಿಮ್ಮ ಗ್ರೂಪ್ ನ ಸದಸ್ಯರ ಸಂಖ್ಯೆಯೂ ಹೆಚ್ಚುತ್ತದೆ. ಜೊತೆಯಲ್ಲಿ, ಕನ್ನಡದಲ್ಲಿ ಅತಿ ಕಡಿಮೆ ಟೈಪ್ ಮಾಡಿದರೂ ಸಾಕಾಗುತ್ತದೆ.

೨. ಇಲ್ಲಿ ನೀವು ಬರೆಯುವ ಕನ್ನಡ ಸರಿಯಾಗಿ ಇರಬೇಕೆಂದಿಲ್ಲ. ಅರ್ಥವಾಗುವಂತಿದ್ದರೆ ಸಾಕು. ಕನ್ನಡಲಿಪಿ ಬರವಣಿಗೆ ಸಹಾಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.

೩. ಒಂದು ಮಾಹಿತಿ ಹಾಕಲು ಹೆಚ್ಚೆಂದರೆ ೨ ನಿಮಿಷ ಬೇಕಾಗಬಹುದು.

೪. ಕೆಲಸ ಹಾಕುವವರು, ಮೊದಲೇ ಬೇರೆಯವರು ಯಾರಾದರೂ ಅದೇ ಕೆಲಸವನ್ನು ಇಲ್ಲಿ ಹಾಕಿದ್ದಾರ್‍ಆ ಎಂದು ಯೋಚಿಸಬೇಕಾಗಿಲ್ಲ. ಯಾರು ಎಷ್ಟು ಸರಿ ಬೇಕಾದರೂ ಹಾಕಬಹುದು ( ಉದಾ: ರೆಫರಲ್/ವಾಕ್ ಇನ್ ಸಂದರ್ಭಗಳಲ್ಲಿ ರೆಫರಲ್ ಬೋನಸ್ ಸಿಕ್ಕುವುದರಿಂದ ಒಬ್ಬರಿಗಿಂತ ಹೆಚ್ಚಿನವರು ಅದೇ ಮಾಹಿತಿಯನ್ನು ಹಾಕಬಹುದು).

೫. ಅನಿವಾರ್ಯ ಇದ್ದಾಗ ಮಾತ್ರ ಇಂಗ್ಲಿಷ್ ಬಳಸಿ.

೬. ಒಮ್ಮೆ ಹಾಕಿದ್ದನ್ನು ತೆಗೆಯಬೇಕಾದರೆ feedback@kannadamitra.com ಗೆ ’ಇಮೈಲ್’ ಕಳಿಸಿ.

 

ಈ ಕಾರ್ಯಕ್ಕೆ ಬೇಕಾಗುವ ಸಮಯ ಕೇವಲ ಎರಡು ನಿಮಿಷ ಸಾಕಿದ್ದರೂ, ಕಾರಾಣಾಂತರಗಳಿಂದ ನಿಮಗೆ ಹಾಕಲು ಸಮಯವಿಲ್ಲದಿದ್ದರೆ ಉದ್ಯೋಗ ಮಾಹಿತಿಯ ’ಇಮೈಲ್’ ನ್ನು feedback@kannadamitra.com ಗೆ ಕಳಿಸಬಹುದು.


All rights reserved. Copyright kannadamitra.com This site uses unicode to display characters in Kannada.
We recommend use of WinXP or above, IE 6.0 or above and FireFox 3 beta 4 or above.
Developed by Dhruva Consulting.
ಉಪಯೋಗಿಸುವ ನಿಬಂಧನೆಗಳು